ಯು.ಆರ್.ಅನಂತಮೂರ್ತಿ

ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ತಮ್ಮ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.

ಜನನ
ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ' ಹಳ್ಳಿಯಲ್ಲಿ, ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ (ಸತ್ಯಭಾಮ).

ವಿದ್ಯಾಭ್ಯಾಸ
'ದೂರ್ವಾಸಪುರ'ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು."ಋಜುವಾತು "ಪತ್ರಿಕೆಯನು ಪ್ರಾರಂಭಿಸಿದರು.

ವೃತ್ತಿ ಜೀವನ
ಹಾಸನ, ಶಿವಮೊಗ್ಗ , ಮೈಸೂರುಗಳಲ್ಲಿ ಇಂಗ್ಲೀಷ್ ಉಪನ್ಯಾಸಕ
ಮೈಸೂರು ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ರೀಡರ್, ೧೯೫೬-೧೯೭೦
ಮೈಸೂರು ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರಾಧ್ಯಾಪಕ, ೧೯೭೦-೮೭
ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ, ೧೯೮೭-೯೧
ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, ೧೯೯೨
ಸಂದರ್ಶಕ ಪ್ರಾಧ್ಯಾಪಕ,ಶಿವಾಜಿ ವಿಶ್ವವಿದ್ಯಾಲಯ ಕೊಲ್ಲಾಪುರ (೧೯೮೨), ಜವಾಹರಲಾಲ್ ವಿಶ್ವವಿದ್ಯಾಲಯ, ದೆಹಲಿ (೧೯೮೫)
ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿ (ದೆಹಲಿ), ೧೯೯೩
ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, ೨೦೦೦
ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷ, ೧೯೯೨
ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿಶ್ವವಿದ್ಯಾಲಯ (೧೯೭೫,೧೯೮೫), ಟೆಕ್ಸಾಸ್ ವಿಶ್ವವಿದ್ಯಾಲಯ (೧೯೭೮, ೧೯೯೭)
ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ (೨೦೧೨)
ಇಂದಿರಾಗಾಂಧಿ ಮುಕ್ತ ವಿ.ವಿ. ಟ್ಯಾಗೋರ್ ಪೀಠದ ಅಧ್ಯಕ್ಷ
ಅಧ್ಯಕ್ಷ, ಆಡಳಿತ ಮಂಡಳಿ, ಫಿಲಂ ಮತ್ತು ಟೆಲಿವಿಶನ್ ಸಂಸ್ಥೆ, ಪುಣೆ (೨೦೦೦-೨೦೦೪)

ಕೃತಿಗಳು
ಕಥಾ ಸಂಕಲನ
ಎಂದೆಂದೂ ಮುಗಿಯದ ಕತೆ (೧೯೫೫)
ಪ್ರಶ್ನೆ (೧೯೬೩)
ಮೌನಿ (೧೯೭೨)
ಆಕಾಶ ಮತ್ತು ಬೆಕ್ಕು (೨೦೦೧)
ಕ್ಲಿಪ್ ಜಾಯಿಂಟ್
ಘಟಶ್ರಾದ್ಧ
ಸೂರ್ಯನ ಕುದುರೆ (೧೯೮೧)
ಪಚ್ಚೆ ರೆಸಾರ್ಟ್ (೨೦೧೧)
ಬೇಟೆ, ಬಳೆ ಮತ್ತು ಓತಿಕೇತ
ಎರಡು ದಶಕದ ಕತೆಗಳು
ಮೂರು ದಶಕದ ಕಥೆಗಳು (೧೯೮೯)
ಐದು ದಶಕದ ಕತೆಗಳು (೨೦೦೨)

ಕಾದಂಬರಿಗಳು
ಸಂಸ್ಕಾರ (೧೯೬೫)
ಭಾರತೀಪುರ (೧೯೭೩)
ಅವಸ್ಥೆ (೧೯೭೮)
ಭವ (೧೯೯೪)
ದಿವ್ಯ (೨೦೦೧)
ಪ್ರೀತಿ ಮೃತ್ಯು ಮತ್ತು ಭಯ (೨೦೧೨)
ವಿಮರ್ಶೆ ಮತ್ತು ಪ್ರಬಂಧ ಸಂಕಲನ
ಪ್ರಜ್ಞೆ ಮತ್ತು ಪರಿಸರ (೧೯೭೧)
ಪೂರ್ವಾಪರ (೧೯೮೦)
ಸಮಕ್ಷಮ (೧೯೮೦)
ಸನ್ನಿವೇಶ (೧೯೭೪)
ಯುಗಪಲ್ಲಟ (೨೦೦೧)
ವಾಲ್ಮೀಕಿಯ ನೆವದಲ್ಲಿ (೨೦೦೬)
ಮಾತು ಸೋತ ಭಾರತ (೨೦೦೭)
ಸದ್ಯ ಮತ್ತು ಶಾಶ್ವತ (೨೦೦೮)
ಬೆತ್ತಲೆ ಪೂಜೆ ಏಕೆ ಕೂಡದು (೧೯೯೯)
ಋಜುವಾತು (೨೦೦೭)
ಶತಮಾನದ ಕವಿ ಯೇಟ್ಸ್ (೨೦೦೮)
ಕಾಲಮಾನ (೨೦೦೯)
ಮತ್ತೆ ಮತ್ತೆ ಬ್ರೆಕ್ಟ್ (೨೦೦೯)
ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯)
ಶತಮಾನದ ಕವಿ ರಿಲ್ಕೆ (೨೦೦೯)
ರುಚಿಕರ ಕಹಿಸತ್ಯಗಳ ಕಾಲ (೨೦೧೧)
ಆಚೀಚೆ (೨೦೧೧)

ನಾಟಕ
ಆವಾಹನೆ (೧೯೬೮)
ಕವನ ಸಂಕಲನ
ಹದಿನೈದು ಪದ್ಯಗಳು (೧೯೬೭)
ಮಿಥುನ (೧೯೯೨)
ಅಜ್ಜನ ಹೆಗಲ ಸುಕ್ಕುಗಳು (೧೯೮೯)
ಅಭಾವ (೨೦೦೯)
ಸಮಸ್ತ ಕಾವ್ಯ (೨೦೧೨)

ಆತ್ಮಕತೆ
ಸುರಗಿ (೨೦೧೨)

ಪ್ರಶಸ್ತಿ ಮತ್ತು ಪುರಸ್ಕಾರಗಳು
ಕೃಷ್ಣರಾವ್ ಚಿನ್ನದ ಪದಕ (೧೯೫೮)
ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಪ್ರಶಸ್ತಿ (ಕ್ರಮವಾಗಿ ೧೯೭೦, ೧೯೭೮, ೧೯೮೯)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೩)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೪)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಾಸ್ತಿ ಪ್ರಶಸ್ತಿ (೧೯೯೪)
ಜ್ಞಾನಪೀಠ ಪ್ರಶಸ್ತಿ (೧೯೯೪)
ಬಷೀರ್ ಪುರಸ್ಕಾರ, ಕೇರಳ ಸರ್ಕಾರ (೨೦೧೨)
ರವೀಂದ್ರ ಟ್ಯಾಗೋರ್ ಸ್ಮಾರಕ ಪದಕ (೨೦೧೨)
ಗಣಕ ಸೃಷ್ಟಿ ಪ್ರಶಸ್ತಿ, ಕೋಲ್ಕತ (೨೦೦೨)
ಪದ್ಮಭೂಷಣ (೧೯೯೮)
ಶಿಖರ್ ಸಮ್ಮಾನ್ (ಹಿಮಾಚಲ ಪ್ರದೇಶ ಸರ್ಕಾರ) (೧೯೯೫)
೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (ತುಮಕೂರು)

ನಿಧನ
ಡಾ.ಅನಂತ ಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಜೊತೆಗೆ ಸಕ್ಕರೆ ಕಾಯಿಲೆ ಕಾಡುತ್ತಿತ್ತು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ 'ಮಣಿಪಾಲ್ ಆಸ್ಪತ್ರೆ'ಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಹೊಂದದೆ ಮೂತ್ರಪಿಂಡ ವೈಫ಼ಲ್ಯ ಹಾಗು ಲಘು ಹೃದಯಾಘಾತದಿಂದ 2014ರ ಆಗಸ್ಟ್ 22ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೆಂಗಳೂರಿನ ಡಾಲರ್ ಕಾಲೊನಿಯಲ್ಲಿ ವಾಸಿಸುತ್ತಿದ್ದ ಮೂರ್ತಿಯವರ ಅಂತಿಮ ಸಂಸ್ಕಾರ, ಬೆಂಗಳೂರಿನ 'ಜ್ಞಾನಭಾರತಿ ಕಲಾಗ್ರಾಮ'ದಲ್ಲಿ2014ರ ಆಗಸ್ಟ್ 23 ನೆಯ ತಾರೀಖಿನ ಮಧ್ಯಾಹ್ನ ಸುಮಾರು ೪ ಗಂಟೆಗೆ ಜರುಗಿತು. ಮೂರ್ತಿಯವರು ಪತ್ನಿ ಎಸ್ತರ್, ಮಗ ಶರತ್ ಮತ್ತು ಮಗಳು ಅನುರಾಧರನ್ನು ಆಗಲಿದ್ದಾರೆ.

ರಿಂದ,
ನಿರ್ವಾಹಕ

Comments